'ಬಿಗ್ ಬಾಸ್': ಈ ವಾರ ಯಾರಿಗೂ ವೋಟ್ ಮಾಡಿ ಹಣ ವ್ಯರ್ಥ ಮಾಡಬೇಡಿ | Filmibeat Kannada

2017-11-22 1,363

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಆರನೇ ವಾರ ಆರಂಭವಾಗಿದೆ. ಆರನೇ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. ಮತಗಳ ಆಧಾರದ ಮೇಲೆ ಚಂದನ್ ಶೆಟ್ಟಿ, ಶ್ರುತಿ ಪ್ರಕಾಶ್, ರಿಯಾಝ್, ಸಮೀರಾಚಾರ್ಯ, ಜಯಶ್ರೀನಿವಾಸನ್, ಅನುಪಮಾ ಗೌಡ, ಜಗನ್ನಾಥ್ ಹಾಗೂ ಸಿಹಿ ಕಹಿ ಚಂದ್ರು ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.ಈ ಎಂಟು ಜನರ ಪೈಕಿ ಈ ವಾರ ಯಾರ ಪರವಾಗಿಯೂ ನೀವು ಎಸ್.ಎಂ.ಎಸ್ ಕಳುಹಿಸಿ ವೋಟ್ ಮಾಡಬೇಡಿ. ಅಪ್ಪಿ-ತಪ್ಪಿ ನಿಮ್ಮ ನೆಚ್ಚಿನ ಸ್ಪರ್ಧಿಯನ್ನ ಉಳಿಸಲು ನೀವೇನಾದರೂ ಎಸ್.ಎಂ.ಎಸ್ ಮಾಡಿದರೆ, ನಿಮ್ಮ ಹಣ ವ್ಯರ್ಥ ಆಗುವುದು ಖಚಿತ. ಮುಂದೆ ಓದಿರಿ.'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಈ ವಾರ ಯಾರೂ ಎಲಿಮಿನೇಟ್ ಆಗಲ್ಲ. ನಾಮಕಾವಸ್ತೆಗಾಗಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ ಹೊರತು ಈ ವಾರ ಯಾರೂ ಔಟ್ ಆಗುವುದಿಲ್ಲ. ಹೀಗಾಗಿ, ಯಾರ ಪರವಾಗಿಯೂ ನೀವು ಎಸ್.ಎಂ.ಎಸ್ ಮಾಡಬೇಡಿ.